Related Posts Plugin for WordPress, Blogger...
Showing posts with label Kannada. Show all posts
Showing posts with label Kannada. Show all posts

Thursday, 13 October 2011

Kannada-English Dictionary hope it ll help you guys :)

I was looking for a dictionary from Kannada -English . I finally found it. I hope this helps the many visitors who wish to translate from both these languages and many times face a tough time really getting the correct work.
All credit to the website which scanned and uploaded the same, and also to the author of this Dictionary.

Online
Kannada dictionary
Read More

Wednesday, 16 March 2011

ಅಂತರ್ಜಾಲದಲ್ಲಿ ಕನ್ನಡಕ್ಕೆ ಸಂಬದಪಟ್ಟ ಎಲ್ಲಾ ಸೈಟ್ ಗಳು

Read More

Kannada audio lyrics

Read More

ತಂತ್ರಜ್ಞಾನದೆಡೆಗೆ ‘ಅಂಚೆ’ ನಡಿಗೆ

ಮಾರ್ಕೆಟ್

ತಂತ್ರಜ್ಞಾನದೆಡೆಗೆ ‘ಅಂಚೆ’ ನಡಿಗೆ





ಸುಮಾರು 247 ವರ್ಷಗಳ ಹಿಂದೆ ಪ್ರಾರಂಭವಾದ ಭಾರತೀಯ ಅಂಚೆ ಇಲಾಖೆ ಈಗ ಆಧುನಿಕ ತಂತ್ರಜ್ಞಾನದತ್ತ ಹೆಜ್ಜೆ ಹಾಕುತ್ತಿದೆ. ‘ಪ್ರತಿಯೊಂದು ಕಂಪ್ಯೂಟರ್‌ಒಂದೊಂದು ‘ಅಂಚೆ ಕಚೇರಿ’ಆಗಿ ಪರಿವರ್ತನೆಗೊಳ್ಳುತ್ತಿರುವ ಕಾಲವಿದು..


‘ಮೊದಲು ಗ್ರಾಹಕರು ಸೇವಾ ಪೂರೈಕೆ ಸಂಸ್ಥೆಗಳನ್ನು ಹುಡುಕಿಕೊಂಡು ಹೋಗುತ್ತಿದ್ದರು. ಈಗ ಸೇವಾ ಪೂರೈಕೆ ಕಂಪೆನಿಗಳೇ ಗ್ರಾಹಕರನ್ನು ಹುಡುಕಿಕೊಂಡು ಬರುತ್ತಿವೆ. ಹೌದು. ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವೂ. ಅಂಚೆ ಇಲಾಖೆಯ ‘ಇ-ಪೋಸ್ಟ್ ಆಫೀಸ್ ತಾಣ’ದ ಉದ್ಘಾಟನೆ ಸಂದರ್ಭದಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಹೇಳಿದ ಈ ಮಾತು ಸತ್ಯಕ್ಕೆ ತುಂಬಾ ಹತ್ತಿರವಾದದ್ದು.

ಭಾರತೀಯ ಅಂಚೆ ಸೇವೆ ಪ್ರಾರಂಭಗೊಂಡದ್ದು 1764ರಲ್ಲಿ. ಅಂದರೆ ಸುಮಾರು 247 ವರ್ಷಗಳ ಹಿಂದೆ. ಈ ಸುಧೀರ್ಘಯಾನದಲ್ಲಿ ಅಂಚೆ ಇಲಾಖೆ ಹಲವು ಸುಧಾರಣೆಗಳನ್ನು ಕಂಡಿದೆ.

ಇಂದಿಗೂ ಗ್ರಾಮೀಣ ಜನತೆಯ ಹೃದಯ ಸಿಂಹಾಸನದಲ್ಲಿ ಬಹು ದೊಡ್ಡ ಸ್ಥಾನ ಹೊಂದಿರುವ ಅಂಚೆ ಇಲಾಖೆ ಇದೀಗ ಮತ್ತಷ್ಟು ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಕಳೆದ ವಾರ ಭಾರತೀಯ ಅಂಚೆ ಇಲಾಖೆಯ ಆನ್‌ಲೈನ್ ತಾಣ ‘ಇ-ಅಂಚೆ’ ಜಾರಿಗೊಂಡಿದೆ. ‘ಇ-ಪೋಸ್ಟ್ ಆಫೀಸ್’ (http://indiapost.nic.in) ತಾಣದ ಮೂಲಕ ಗ್ರಾಹಕರು ಮನೆಯಲ್ಲಿ ಕುಳಿತೇ ಅಂಚೆ ಸೇವೆ ಪಡೆಯಬಹುದು.


ಅಂದರೆ ತಾಣದಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಮನಿಯಾರ್ಡ್‌ರ್‌ಗಳನ್ನು ಕಳುಹಿಸಬಹುದು. ಎಲೆಕ್ಟ್ರಾನಿಕ್ ಮನಿಯಾರ್ಡರ್ (ಇಎಂಒ) ಮತ್ತು ಇನ್‌ಸ್ಟಂಟ್ ಮನಿಯಾರ್ಡರ್ (ಐಎಂಒ) ಮೂಲಕ ದೇಶದ ಯಾವುದೇ ಭಾಗಕ್ಕೆ ಬೇಕಾದರೂ ಕ್ಷಣಾರ್ಥದಲ್ಲಿ ಹಣ ರವಾನಿಸಬಹುದು.

ಮುದ್ರಿತ, ಕೈಬರಹದ ಪತ್ರಗಳನ್ನು ಸ್ಕ್ಯಾನ್ ಮಾಡಿ ಕಳುಹಿಸಬಹುದು. ವಿಳಾಸ ತಿಳಿಯದಿದ್ದರೆ ‘ಪಿನ್ ಕೋಡ್’ ನಮೂದಿಸಿ ಅಂಚೆ ವಿಳಾಸ ಹುಡುಕುವ ಸೌಲಭ್ಯವೂ ಇದರಲ್ಲಿದೆ. ಅಂಚೆಚೀಟಿಗಳ ಬಗ್ಗೆ ಮಾಹಿತಿ ಪಡೆಯಬಹುದು.
ಅಂತರ್‌ದೇಶೀಯ, ಮತ್ತು ಅಂತರ್‌ರಾಷ್ಟ್ರೀಯ ಪತ್ರಗಳ ಮೇಲೆ ನಿಗಾ ವಹಿಸಬಹುದು. ‘ಪ್ರತಿಕ್ರಿಯೆ, ದೂರುಗಳನ್ನು ಆನ್‌ಲೈನ್‌ನಲ್ಲಿಯೇ ದಾಖಲಿಸಬಹುದು.

‘ಇ-ಪೋಸ್ಟ್’ ತಾಣದಲ್ಲಿ ಕರಕುಶಲ ವಸ್ತು, ಸಣ್ಣ ಕೈಗಾರಿಕೆಗಳ ಉತ್ಪನ್ನಗಳ ಮಾರಾಟ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಪ್ರಾರಂಭದಲ್ಲಿ 5 ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಇದು ಜಾರಿಗೆ ಬರಲಿದೆ. ನಂತರ ದೇಶದಾದ್ಯಂತ ವಿಸ್ತರಿಸಲಾಗುವುದು.

‘ಈಗ ನಾವು ಅಂತರ್ಜಾಲದ ಮೂಲಕ ಅಂಚೆ ಇಲಾಖೆಯನ್ನು ಈ ದೇಶದ ಪ್ರತಿಯೊಬ್ಬ ನಾಗರಿಕನ ಮುಂದೆ ತರುತ್ತಿದ್ದೇವೆ’ ಎನ್ನುತ್ತಾರೆ ಭಾರತೀಯ ಅಂಚೆ ಇಲಾಖೆಯ ಕಾರ್ಯದರ್ಶಿ ರಾಧಿಕಾ ದೊರೈಸ್ವಾಮಿ.

‘ಈ ತಾಣವು ಅಂಚೆ ಇಲಾಖೆಯ ವಾಣಿಜ್ಯ ತಾಣವಾಗಿಯೂ ಕಾರ್ಯನಿರ್ವಹಿಸಲಿದೆ. ಸದ್ಯ ಇಂಗ್ಲಿಷ್ ಭಾಷೆಯಲ್ಲಿರುವ ತಾಣವನ್ನು ಮುಂಬರುವ ದಿನಗಳಲ್ಲಿ ಇತರೆ ಪ್ರಾದೇಶಿಕ ಭಾಷಾ ಆವೃತ್ತಿಗಳಲ್ಲೂ ಒದಗಿಸಲಾಗುವುದು.

ಬಂಗಾಳಿ ಮತ್ತು ಕನ್ನಡ ಭಾಷಾ ಆವೃತ್ತಿಗಳು ಶೀಘ್ರದಲ್ಲಿ ಜಾರಿಗೆ ಬರಲಿವೆ. ‘ಪ್ರತಿಯೊಂದು ಕಂಪ್ಯೂಟರ್‌ಗಳನ್ನೂ ಒಂದೊಂದು ‘ಅಂಚೆ ಕಚೇರಿ’ಗಳಾಗಿ ಪರಿವರ್ತಿಸುವುದು ನಮ್ಮ ಮುಂದಿರುವ ಯೋಜನೆ ಎನ್ನುತ್ತಾರೆ ಸಿಬಲ್.
ಮಾಹಿತಿ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ, ಅಂಚೆ ಇಲಾಖೆ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಬ್ಯಾಂಕಿಂಗ್ ಸೇವೆಗಳು ತಲುಪದ ಹಳ್ಳಿಗಳಲ್ಲೂ ಸೇವೆ ನೀಡುತ್ತಿದೆ. ತಂತ್ರಜ್ಞಾನ ಬದಲಾದರೂ ಅದೇ ವಿಶ್ವಾಸ ಮತ್ತು ಪ್ರೀತಿ ಉಳಿಸಿಕೊಂಡಿದೆ.

ಬೇಕಾದರೆ ಗಮನಿಸಿ ನೋಡಿ. ಮನೆಯ ಬಾಗಿಲಿಗೆ ಬಂದ ಓರ್ವ ಕೋರಿಯರ್ ಹುಡುಗನನ್ನು ಜನರು ನೋಡುವ ರೀತಿಗೂ, ಅಂಚೆಯಾತನನ್ನು ಮಾತನಾಡಿಸುವ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ.

ಅಂಚೆ ಇಲಾಖೆ ದೇಶದ ಗ್ರಾಮೀಣ ಜನರ ಜೀವನಾಡಿಯಾಗಿ ಎನ್ನುವುದದರಲ್ಲಿ ಎರಡು ಮಾತಿಲ್ಲ.
ಅಂಚೆಪಟ್ಟಿಗೆ, ಅಂಚೆಚೀಟಿ, ಅಂಚೆಯಾಳು, ಮನಿಯಾರ್ಡ್‌ರ್, ಇನ್‌ಲ್ಯಾಂಡ್ ಲೆಟರ್ ಇವೆಲ್ಲಾ ಜನರ ನಾಲಗೆಯ ತುದಿಯಲ್ಲಿರುವ ಚಿರಪರಿಚಿತ ಪದಗಳು. ಇಂದಿಗೂ ಸುಮಾರು 16 ಕೋಟಿ ಜನರು ತಮ್ಮ ಸಣ್ಣ ಉಳಿತಾಯಗಳಿಗಾಗಿ ಅಂಚೆ ಕಚೇರಿಗಳನ್ನು ಅವಲಂಬಿಸಿದ್ದಾರೆ.

4 ವರ್ಷದ ಹಿಂದಿನ ಅಂಕಿ ಅಂಶದಂತೆ ಅಂಚೆ ಇಲಾಖೆಯಲ್ಲಿ ಗ್ರಾಮೀಣ ಜನತೆ ಉಳಿಸಿದ ಮೊತ್ತ ಈ ಉಳಿತಾಯ ಮೊತ್ತ 3,23,781 ಕೋಟಿ. ಅಂಚೆ ಸೇವೆಯನ್ನು ದೇಶದಲ್ಲಿ 22 ಅಂಚೆ ವೃತ್ತಗಳಲ್ಲಿ ವಿಭಾಗಿಸಲಾಗಿದ್ದು, ಇದರ ಹೊರತಾಗಿ ಭಾರತೀಯ ಸೇನೆಯ ಅಂಚೆ ವ್ಯವಹಾರ ನೋಡಿಕೊಳ್ಳಲು ಪತ್ಯೇಕ ವೃತ್ತವಿದೆ. ಸೇನೆಯ ಸಹಾಯಕ ಡೈರೆಕ್ಟರ್ ಜನರಲ್ ಇದರ ಉಸ್ತುವಾರಿ ನೋಡಿಕೊಳ್ಳುತ್ತಾರೆ.

ಇ-ಪಾವತಿ: ಅಂಚೆ ಇಲಾಖೆ ಜಾರಿಗೊಳಿಸಿರುವ ‘ಇ-ಪಾವತಿ’ ವ್ಯವಸ್ಥೆ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಒಂದೇ ಸೂರಿನಡಿ ಬಹುಸೇವೆ ಪಡೆಯಬಹುದಾದ ಈ ಸೌಲಭ್ಯದಡಿ ಗ್ರಾಹಕರು ತಮ್ಮ ವಿದ್ಯುತ್, ದೂರವಾಣಿ ಶುಲ್ಕಗಳನ್ನು ಪಾವತಿಸಬಹುದಾಗಿದೆ.

ಐಎಂಒ: ಇನ್‌ಸ್ಟಂಟ್ ಮನಿಯಾರ್ಡ್‌ರ್ ಸೇವೆ ಸದ್ಯ ದೇಶದಾದ್ಯಂತ 717 ಅಂಚೆ ಕಚೇರಿಗಳಲ್ಲಿ ಲಭ್ಯವಿದೆ. ಈ ಸೇವೆಯಡಿ ಗ್ರಾಹಕರು ದೇಶದ ಯಾವುದೇ ಮೂಲಗೆ ಬೇಕಾದರೂ ತಕ್ಷಣವೇ 50,000ದ ವರೆಗೆ ಹಣವನ್ನು ಕಳುಹಿಸಬಹುದು.

ಐಎಂಟಿ: ವೆಸ್ಟ್ರನ್ ಯೂನಿಯನ್ ಹಣಕಾಸು ಸೇವೆಗಳ ಸಹಭಾಗಿತ್ವದಲ್ಲಿ ಅಂಚೆ ಇಲಾಖೆ ಜಾರಿಗೊಳಿಸಿರುವ ‘ಇಂಟರ್‌ನ್ಯಾಷನಲ್ ಮನಿ ಟ್ರಾನ್ಸ್‌ಫರ್’ (ಐಎಂಟಿ) ಸೇವೆ ಮೂಲಕ 180 ದೇಶಗಳಿಗೆ ಹಣ ಕಳುಹಿಸಬಹುದಾಗಿದೆ.

ಅನಿವಾಸಿ ಭಾರತೀಯರು (ಎನ್‌ಆರ್‌ಐ) ಭಾರತದಲ್ಲಿರುವ ತಮ್ಮ ಕುಟುಂಬಗಳಿಗೆ ಹಣ ಕಳುಹಿಸಿಕೊಡಲು ಈ ಸೌಲಭ್ಯ ಅನುಕೂಲ ಕಲ್ಪಿಸಿದೆ. ಅಲ್ಲದೆ ಭಾರತಕ್ಕೆ ಪ್ರವಾಸ ಬರುವ ವಿದೇಶಿಗರು, ಇಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಅನುಕೂಲ ಕಲ್ಪಿಸಿದೆ.

ಈಗ ಪತ್ರ ಬರುವುದು ಅಪರೂಪ. ಬರೆಯುವ ಮನಸ್ಸು ಕೂಡ ಯಾರಿಗೂ ಇಲ್ಲ. ಹಾಗಾಗಿ ಅಂಚೆಯಣ್ಣನ ದಾರಿ ಕಾಯುವವರಿಲ್ಲ. ವೇಗದ ಬದುಕಿನೊಂದಿಗೆ ನಮ್ಮ ಜೀವನ ಕ್ರಮ ಕೂಡ ಬದಲಾಗಿದೆ.

ಭಾವನೆಗಳು ಔಪಚಾರಿಕ ಎನ್ನುವಷ್ಟರ ಮಟ್ಟಿಗೆ ಸಂಕುಚಿತಗೊಂಡಿದೆ. ‘ಪತ್ರ ಬರಲಿ, ಬರದೇ ಇರಲಿ, ಅಂಚೆಯಣ್ಣ ಮಾತ್ರ ದಿನವೂ ಮನೆಗೆ ಬಂದು ಹೋಗುತ್ತಿರಲಿ’ ಅಂಚೆ ಇಲಾಖೆಯೊಂದರಲ್ಲಿ ಬರೆದಿರುವ ಕವಿ ಚನ್ನವೀರ ಕಣವಿ ಅವರ ಈ ಸಾಲಿನಲ್ಲಿ ಎಷ್ಟೊಂದು ಆತ್ಮೀಯತೆ ಇದೆ.

ಮೊದಲ ಅಂಚೆ ಚೀಟಿ ಬಳಕೆಗೆ ಬಂದದ್ದು 1854 ಅಕ್ಟೋಬರ್‌ನಲ್ಲಿ ಸದ್ಯ 155,333 ಅಂಚೆ ಕಚೇರಿಗಳನ್ನು ಭಾರತೀಯ ಅಂಚೆ ಇಲಾಖೆ ಹೊಂದಿದೆ. 520161 ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಪ್ರಪಂಚದಲ್ಲಿಯೇ ಅತಿ ದೊಡ್ಡ ಸಂಪರ್ಕಜಾಲ ಹೊಂದಿರುವ ಅಂಚೆ ಸೇವೆ ನಮ್ಮದು. ಅಕ್ಟೋಬರ್ 10 ರಂದು ವಿಶ್ವ ಅಂಚೆ ದಿನ ಆಚರಿಸಲಾಗುತ್ತದೆ.

ಏನಿದು ‘ಪಿನ್’ ಕೋಡ್?
ಪೋಸ್ಟಲ್ ಇಂಡೆಕ್ಸ್ ನಂಬರ್ ಅಥವಾ ‘ಪಿನ್‌ಕೋಡ್’ ಎಂದು ಕರೆಯಲಾಗುವ ಆರು ಸಂಖ್ಯೆಗಳು ಅಂಚೆ ಸೇವೆಯಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ.

ಮೊದಲ ಅಂಕಿ ತಲುಪಬೇಕಾದ ಅಂಚೆ ವೃತ್ತವನ್ನು ಸೂಚಿಸುತ್ತದೆ. ನಂತರದ ಎರಡು ಅಂಕಿಗಳು ‘ಪ್ರದೇಶ’ವನ್ನೂ ಕೊನೆಯ 3 ಸಂಖ್ಯೆಗಳು ನಿರ್ದಿಷ್ಟ ಅಂಚೆ ಇಲಾಖೆಯನ್ನೂ ಸೂಚಿಸುತ್ತದೆ. ಒಮ್ಮೊಮ್ಮೆ ವಿಳಾಸ ತಪ್ಪಾಗಿ ಬರೆದಿದ್ದರೂ, ‘ಪಿನ್’ ಸಂಖ್ಯೆ ಸರಿಯಾಗಿದ್ದರೆ ಪತ್ರ ಸರಿಯಾಗಿ ವಿತರಣೆಯಾಗುವುದು ಈ ಸಂಖ್ಯೆಗಳ ಮುಖಾಂತರವೇ.
http://www.prajavani.net/Content/Mar162011/techno20110315230848.asp
Read More

About kannada language

Kannada language, also called Kanarese or Kannana, member of the Dravidian language family and the official language of the state of Karnataka in southern India. Kannada is also spoken in the states that border Karnataka. Early 21st-century census data indicated that some 38 million individuals spoke Kannada as their first language; another 9 to 10 million were thought to speak it as a secondary language. In 2008 the government of India granted Kannada classical-language status.

Kannada is the second oldest of the four major Dravidian languages with a literary tradition. The oldest Kannada inscription was discovered at the small community of Halmidi and dates to about 450 ce. The Kannada script evolved from southern varieties of the Ashokan Brahmi script. The Kannada script is closely related to the Telugu script; both emerged from an Old Kannarese (Karnataka) script. Three historical stages are recognised: Old Kannada (450–1200 ce), Middle Kannada (1200–1700 ce), and Modern Kannada (1700 ce–present).

The word order is subject–object–verb, as in the other Dravidian languages. Verbs are marked for person, number, and gender. The case-marking pattern is nominative-accusative, with experiencer subjects taking the dative inflection. Most inflection is rendered through affixation, especially of suffixes. The language uses typical Dravidian retroflex consonants (sounds pronounced with the tip of the tongue curled back against the roof of the mouth), such as /ḍ/, /ṇ/, and /ṭ/, as well as a series of voiced and voiceless aspirates borrowed from the Indo-Aryan language family.

Three regional varieties of Kannada are identifiable. The southern variety is associated with the cities of Mysore and Bangalore, the northern with Hubli-Dharwad, and the coastal with Mangalore. The prestige varieties are based on the Mysore-Bangalore variety. Social varieties are currently characterized by education and class or caste, resulting in at least three distinct social dialects: Brahman, non-Brahman, and Harijan (formerly untouchable). A diglossia or dichotomy also exists between formal literary varieties and spoken varieties.

Kannada literature began with the Kavirajamarga of Nripatunga (9th century ce) and was followed by Pampa’s Bharata (941 ce). The earliest extant grammar is by Nagavarma and dates to the early 12th century; the grammar of Keshiraja (1260 ce) is still respected. Kannada literature was influenced by the Lingayat (Virasaiva) and the Haridasa movements. In the 16th century the Haridasa movement of vernacular devotional song reached its zenith with Purandaradasa and Kanakadasa, the former considered the father of Karnatak music, the classical music of southern India.
Read More

Tuesday, 15 March 2011

ನನ್ನ ಕವನ


                ನನ್ನ ಕವನ  
ನೂರಾರು ಕನಸನ್ನು ನನ್ನ ಮನದಲ್ಲಿ ಬಿತ್ತಿ,
ನೂರಾರು ಆಸೆಯನ್ನು ನನ್ನ ಹೃದಯದಲ್ಲಿ ಕೆತ್ತಿ,
ನನಗೂ ತಿಳಿಯದಂತೆ ನನ್ನ ಹೃದಯ 
ಕದ್ದ ಆ ಚೋರಿ  ಯಾರು..

 ಅಲ್ಲೆಲ್ಲೋ ನಿಂತು ಕಾಡುತ್ತಿರುವೆ ಏಕೆ ,
ನಿನಗಾಗಿ ಕಾದಿದೆ ಈ ಪ್ರೀತಿಯ ಬಯಕೆ,
ಎಲ್ಲಿರುವೆ ಬಾರೆ ಬೇಗ ನನ್ನ ಸನಿಹಕೆ ,
ಆಗ ನನ್ನ ಮನ ಹೋಗುವುದು ಸ್ವರ್ಗದ ಉತ್ಸವಕೆ 

ಮಾಮರದ ತಂಪಿಗೆ ಕಾದಿರುವ ಗಿಳಿಯಂತೆ,
ವಸಂತ ಕಾಲಕ್ಕಾಗಿ ಜಪಿಸುತ್ತಿರುವ ಕೋಗಿಲೆಯಂತೆ,
ಸ್ವಾತಿ ಮಳೆಗಾಗಿ ಹಂಬಲಿಸುವ  ಕಪ್ಪೆ  ಚಿಪ್ಪಿನಂತೆ ,
ನಾ ಕಾದಿರುವೆನು  ನಿನಗಾಗಿ ಬರದಿಂದ ಕಂಗೆಟ್ಟ ಭೂಮಿಯಂತೆ !!

 ನಾ ಬಲ್ಲೆ ನೀ ನನ್ನ ಹತ್ತಿರ ಬರಲೊಲ್ಲೆ,
ಆದರು ನಾ ನಿನ್ನ  ಬಿಡಲಾರೆ ನಲ್ಲೆ ,
ಯಾರು ಏನೇ ಅಂದರು ,ನೀನೆ ಕೈ ಕೊಟ್ಟರು,
ನೀ ನಿರುವೆ ನನ್ನಲ್ಲಿ ನನ್ನ ಹೃದಯ ಬಡಿತದಂತೆ....
           \ \**ಸಚ್ಚಿ **\\
 
Read More

ನೆನಪು --ಕನಸು


ನೆನಪು --ಕನಸು
ಒಲವೆಂಬ ಸುಧೆಯಲ್ಲಿ ಬಿದ್ದ ದುಂಬಿಯಂತೆ ,
ಅತ್ತ ತೇಲಲು ಆಗದೆ ಇತ್ತ ಮುಳುಗಲು ಆಗದೆ
ತವಕ ಪಡುತ್ತಿರುವ ನಾ ನೊಬ್ಬ ಭಗ್ನಪ್ರೇಮಿ ...:-(

ಕಾಯುತ್ತಿರುವೆ ನಾನು ನನ್ನ ಮುಂದಿನ ಸುದಿನಗಳತ್ತ,
ಹಳೆಯ ನೆನಪುಗಳನ್ನೆಲ್ಲ ಮರೆಯುತ ,
ಹೊಸ ಕನಸುಗಳಿಗಾಗಿ ಹಾತೊರೆಯುತ್ತಿರುವ
ನಾ ನೊಬ್ಬ ಆಶಾವಾದಿ...

ನೂರಾರು ಕನಸುಗಳಿವೆ ಎಂದು ನಾ ಬಲ್ಲೆ,
ಈ ಕನಸುಗಳಿಗಾಗಿ ಮರೆಯಬೇಕು ನನ್ನ ಆ ಕಹಿ ದಿನಗಳನ್ನ ,
ಈ ಕನಸೆಲ್ಲ ನನಸು ಮಾಡಿ ನಾ ನನ್ನ ಜೀವನದಲ್ಲಿ
ಗೆದ್ದೇ ಗೆಲ್ಲುವೆ ವಿಜಯಿಯಾಗಿ...   :-)
            **ಸಚ್ಚಿ **
Read More