ನನ್ನ ಕವನ
ನೂರಾರು ಕನಸನ್ನು ನನ್ನ ಮನದಲ್ಲಿ ಬಿತ್ತಿ,
ನೂರಾರು ಆಸೆಯನ್ನು ನನ್ನ ಹೃದಯದಲ್ಲಿ ಕೆತ್ತಿ,
ನನಗೂ ತಿಳಿಯದಂತೆ ನನ್ನ ಹೃದಯ
ಕದ್ದ ಆ ಚೋರಿ ಯಾರು..
ಅಲ್ಲೆಲ್ಲೋ ನಿಂತು ಕಾಡುತ್ತಿರುವೆ ಏಕೆ ,
ನಿನಗಾಗಿ ಕಾದಿದೆ ಈ ಪ್ರೀತಿಯ ಬಯಕೆ,
ಎಲ್ಲಿರುವೆ ಬಾರೆ ಬೇಗ ನನ್ನ ಸನಿಹಕೆ ,
ಆಗ ನನ್ನ ಮನ ಹೋಗುವುದು ಸ್ವರ್ಗದ ಉತ್ಸವಕೆ 
ಮಾಮರದ ತಂಪಿಗೆ ಕಾದಿರುವ ಗಿಳಿಯಂತೆ,
ವಸಂತ ಕಾಲಕ್ಕಾಗಿ ಜಪಿಸುತ್ತಿರುವ ಕೋಗಿಲೆಯಂತೆ,
ಸ್ವಾತಿ ಮಳೆಗಾಗಿ ಹಂಬಲಿಸುವ ಕಪ್ಪೆ ಚಿಪ್ಪಿನಂತೆ ,
ನಾ ಕಾದಿರುವೆನು ನಿನಗಾಗಿ ಬರದಿಂದ ಕಂಗೆಟ್ಟ ಭೂಮಿಯಂತೆ !!
ನಾ ಬಲ್ಲೆ ನೀ ನನ್ನ ಹತ್ತಿರ ಬರಲೊಲ್ಲೆ,
ಆದರು ನಾ ನಿನ್ನ ಬಿಡಲಾರೆ ನಲ್ಲೆ ,
ಯಾರು ಏನೇ ಅಂದರು ,ನೀನೆ ಕೈ ಕೊಟ್ಟರು,
ನೀ ನಿರುವೆ ನನ್ನಲ್ಲಿ ನನ್ನ ಹೃದಯ ಬಡಿತದಂತೆ....
\ \**ಸಚ್ಚಿ **\\
0 comments
Post a Comment