Related Posts Plugin for WordPress, Blogger...

Wednesday, 12 October 2011

ಜೋಕ್ಸ್ kannada jokes

ಗುಂಡ ಮತ್ತು ಗುಂಡಿ ಸೆಕೆಂಡ್ ಹನಿಮೂನಿಗೆಂದು ಬಂದು, ಹೋಟೆಲ್ ನಲ್ಲಿ ತಂಗಿದ್ದರು. ಗುಂಡ ಒಮ್ಮೆಲೇ ಬೊಂಬಡಾ ಹೊಡೆಯಲು ಆರಂಭಿಸಿದ..
ಗುಂಡ : ಯಾರ್ರೀ ಅಲ್ಲಿ, ಬನ್ನಿ ಬೇಗ.. ನನ್ನ ಹೆಂಡತಿ ಕಿಟಕಿಯಿಂದ ಧುಮುಕಿ ಸಾಯಬೇಕೆಂದಿದ್ದಾಳೆ..
ರಿಸೆಪ್ಸನಿಸ್ಟ್ : ಅದಕ್ಕೆ ನಾವು ಏನು ಮಾಡಕ್ಕಾಗುತ್ತೆ ಹೇಳಿ?
ಗುಂಡ : ಕಿಟಕಿ ತುಂಬಾ ಬಿಗಿಯಾಗಿದೆ.. ಬಂದು ಸ್ವಲ್ಪ ಓಪನ್ ಮಾಡ್ರೀ..

***
ಗುಂಡ : ಸಾರ್.. ನನ್ನ ಹೆಂಡತಿ ಕಾಣೆಯಾಗಿದ್ದಾಳೆ.
ಪೋಸ್ಟ್ ಮ್ಯಾನ್ : ಇದು ಪೋಸ್ಟ್ ಆಫೀಸ್, ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಡಿ.
ಗುಂಡ : ಒಹ್.. ಸಾರಿ.. ನನಗಾಗಿರುವ ಖುಷಿಗೆ ಎಲ್ಲಿಗೆ ಹೋಗುತ್ತಿದ್ದೇನೆಂದು ಅರ್ಥಾನೆ ಆಗ್ತಿಲ್ಲ.

***
ರೋಗಿ : ಡಾಕ್ಟರ್ ನನ್ನ ಮಗಳಿಗೆ ಐದು ದಿನದಿಂದ ಸರಿಯಾಗಿ ಕಿವಿ ಕೇಳಿಸುತ್ತಿಲ್ಲ..
ಡಾಕ್ಟರ್ : ಏನು? ಐದು ದಿನದಿಂದ ಜ್ವರ ಇಟ್ಟುಕೊಂಡು ಇವತ್ತು ಬರ್ತಾ ಇದ್ದೀರಲ್ಲಾ

***
ಗುಂಡ : ಬೊಗೊಳೊ ನಾಯಿ ಯಾಕೋ ಕಚ್ಚಲ್ಲಾ?
ತಿಮ್ಮ : ನನಗೆ ಗೊತ್ತಿಲ್ಲಾ.. ನೀನೆ ಹೇಳಪ್ಪಾ..
ಗುಂಡ : ಪೆದ್ದ, ಒಂದೇ ಸಮಯದಲ್ಲಿ ಎರಡು ಕೆಲಸ ಹೇಗೋ ಮಾಡಕ್ಕಾಗುತ್ತೆ?
***
ಗುಂಡ ಅಡುಗೆ ಮನೆಗೆ ಹೋಗಿ ಸಕ್ಕರೆ ಡಬ್ಬವನ್ನು ಓಪನ್ ಮಾಡಿ, ನೋಡಿ ಮತ್ತೆ ಮುಚ್ಚಿದ. ಪ್ರತಿ ಒಂದು ಗಂಟೆಗೆ ಒಂದು ಬಾರಿ ಈ ರೀತಿ ಮಾಡುತ್ತಿದ್ದ. ಇದನ್ನೆಲ್ಲಾ ಗಮನಿಸುತ್ತಿದ್ದ ಗುಂಡನ ಮಡದಿ ಗುಂಡಿ...
ಗುಂಡಿ : ರೀ ನಾನು ಆವಾಗಿಂದ ನೋಡ್ತಾನೆ ಇದ್ದೀನಿ, ಸಕ್ಕರೆ ಡಬ್ಬ ಓಪನ್ ಮಾಡ್ತೀರಾ, ನೋಡ್ತೀರಾ ಮತ್ತೆ ಮುಚ್ಚುತ್ತೀರಾ. ಏನು ಮಾಡ್ತಾ ಇದ್ದೀರಾ ನೀವು?
ಗುಂಡ : ಡಾಕ್ಟರ್ ಹೇಳಿದ್ದಾರೆ ಪ್ರತಿ ಗಂಟೆಗೊಮ್ಮೆ ಸುಗರ್ ಲೆವೆಲ್ ಚೆಕ್ ಮಾಡೀಂತಾ!

***
ತಿಮ್ಮ : ಯಾಕೋ ರಮೇಶ್ ಮನೆಯ ಗೃಹ ಪ್ರವೇಶಕ್ಕೆ ಬರಲಿಲ್ಲಾ?
ಗುಂಡ : ಬರಬೇಕೂಂತಾನೆ ಇದ್ದೆ, ಆದ್ರೆ ಯಾವ ಕಲ್ಯಾಣ ಮಂಟಪದಲ್ಲಿ ಅಂತ ಅವ್ನು ಹೇಳೇ ಇಲ್ಲಾ.

***
ತಿಮ್ಮ : ಯಾಕೋ ಅಳತಿದ್ದೀಯಾ?
ಗುಂಡ : ಜುಲೈ ತಿಂಗಳಲ್ಲಿ ನಮ್ಮಪ್ಪ ಸತ್ತು ಹೋದ್ರು, ನನ್ನ ಹೆಸರಲ್ಲಿ ಒಂದು ಲಕ್ಷ ಬಿಟ್ಟು ಹೋದ್ರು. ಆಗಸ್ಟ್ ತಿಂಗಲ್ಲಿ ನಮ್ಮ ಅತ್ತೆ ತೀರಿ ಹೋದ್ರು ಅವ್ರು ನನ್ನ ಹೆಸರಲ್ಲಿ ಎರಡು ಲಕ್ಷ ಬಿಟ್ಟು ಹೋದ್ರು. ಹೋದ ತಿಂಗಳಲ್ಲಿ ನಮ್ಮ ಮಾವ ತೀರಿ ಹೋದ್ರು, ಅವರು ಕೂಡಾ ನನ್ನ ಹೆಸರಲ್ಲಿ ಎರಡು ಲಕ್ಷ ಬಿಟ್ಟು ಹೋದ್ರು.
ತಿಮ್ಮ : ಸಾವು ಏನು ಮಾಡಕ್ಕಾಗಲ್ಲಾ. ಅಷ್ಟೆಲ್ಲಾ ದುಡ್ಡು ಬಿಟ್ಟು ಹೋಗಿದ್ದಾರಲ್ಲಾ. ಮತ್ತೆ ಯಾಕೆ ಅಳತಿದ್ದೀಯಾ?
ಗುಂಡ : ಈ ತಿಂಗಳಲ್ಲಿ ಯಾರು ಸಾಯಲಿಲ್ಲಾ ಅದಕ್ಕಪ್ಪಾ!

***
ಒಂದು ದಿನ ಗುಂಡನ ಹಿಂದೆ ಒಂದು ನಾಯಿ ಓಡಿ ಬರುತ್ತಿತ್ತು. ಇದನ್ನೇ ನೋಡುತ್ತಿದ್ದ ಗುಂಡ ಸಂತೋಷದಿಂದ ನಗುತ್ತಿದ್ದ..
ತಿಮ್ಮ : ಯಾಕೋ ತುಂಬಾ ಸಂತೋಷವಾಗಿದ್ದೀಯಾ?
ಗುಂಡ : ನೋಡೋ ನಾನು ಬಳಸೋದು ಏರ್ ಟೆಲ್, ಆದ್ರೆ ಹಚ್ ನೆಟ್ವರ್ಕ್ ನನ್ನನ್ನು ಫಾಲೋ ಮಾಡ್ತಾ ಇದೆ.
***

0 comments

Post a Comment